ಬೆಲೆ ಏರಿಕೆ ಕಳವಳ; ಗೋಮಾಂಸ, ಕಾಫಿ ಮತ್ತು ಹಣ್ಣುಗಳ ಮೇಲಿನ ಸುಂಕವನ್ನು ರದ್ದುಗೊಳಿಸಿದ ಡೊನಾಲ್ಡ್​ ಟ್ರಂಪ್ | Donald Trump

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published on
ನ್ಯೂಯಾರ್ಕ್: ಅಮೆರಿಕದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆಯ ನಡುವೆ ಗೋಮಾಂಸ, ಕಾಫಿ ಮತ್ತು ಹಣ್ಣು ಸೇರಿದಂತೆ ಹಲವಾರು ಉತ್ಪನ್ನಗಳ ಮೇಲಿನ ಸುಂಕವನ್ನು ತೆಗೆದುಹಾಕಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಕಾರ್ಯಕಾರಿ ಆದೇಶಕ್ಕೆ ಶನಿವಾರ (ನ.15) ಸಹಿ ಹಾಕಿದ್ದಾರೆ.
ವರದಿಗಳ ಉಲ್ಲೇಖಿಸಿರುವ ಪ್ರಕಾರ, ಈ ತಿಂಗಳ ಆರಂಭದಲ್ಲಿ ನಡೆದ ಮಧ್ಯಂತರ ಚುನಾವಣೆಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಗೆಲುವಿನ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯುಎಸ್​ನಲ್ಲಿರುವ ರಾಜ್ಯಗಳಾದ ವರ್ಜೀನಿಯಾ ಮತ್ತು ನ್ಯೂಜೆರ್ಸಿಯ ಮತದಾರರಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಅಲ್ಲದೆ, ಹಣದುಬ್ಬರ ಮತ್ತು ಬೆಲೆ ಏರಿಕೆಯು ಅನೇಕ ಅಮೆರಿಕನ್ನರಿಗೆ ಪ್ರಮುಖ ತಲೆನೋವಾಗಿ ಪರಿಣಮಿಸಿದೆ ಎಂದು ಈ ಚುನಾವಣೆ ಸಾಬೀತು ಮಾಡಿದೆ.
ಏಪ್ರಿಲ್‌ನಲ್ಲಿ ಟ್ರಂಪ್ ವಿವಿಧ ದೇಶಗಳ ಮೇಲೆ ಆತಿಯಾದ ಸುಂಕಗಳನ್ನು ವಿಧಿಸಿದರು. ಅಲ್ಲದೆ, ಈ ಬಗ್ಗೆ ಟ್ರಂಪ್​ ಆಡಳಿತವು ಈ ಸುಂಕಗಳು ಗ್ರಾಹಕರ ಬೆಲೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಸಮರ್ಥಿಸಿಕೊಂಡಿತ್ತು. ಅದರೆ, ನಿರ್ದಿಷ್ಟವಾಗಿ ಗೋಮಾಂಸದ ಹೆಚ್ಚಿನ ಬೆಲೆಯು ಹಿಚ್ಚಿನ ಗಮನ ಸೆಳೆಯುತ್ತಿದೆ ಮತ್ತು ಟ್ರಂಪ್ ಏರಿಸುತ್ತಿರುವ ಬೆಲೆಗಳ ವಿರುದ್ಧ ಕ್ರಮ ಕೈಗೊಳ್ಳುವ ಉದ್ದೇಶವನ್ನು ಈ ಹಿಂದೆ ಘೋಷಿಸಿದ್ದಾರೆ. ಅಲ್ಲದೆ, ಗೋಮಾಂಸ ರಫ್ತುದಾರ ಬ್ರೆಜಿಲ್ ಮೇಲಿನ ಸುಂಕಗಳು ಈ ಏರಿಕೆಗೆ ಕಾರಣ ಎಂದು ವರದಿಯಾಗಿವೆ.
ಹೊಸ ಕಾರ್ಯಕಾರಿ ಆದೇಶವು ಚಹಾ, ಹಣ್ಣಿನ ರಸಗಳು, ಕೋಕೋ, ಮಸಾಲೆಗಳು, ಬಾಳೆಹಣ್ಣುಗಳು, ಕಿತ್ತಳೆ, ಟೊಮೆಟೊಗಳು ಮತ್ತು ಕೆಲವು ರಸಗೊಬ್ಬರಗಳಂತಹ ವಸ್ತುಗಳ ಮೇಲಿನ ಸುಂಕಗಳನ್ನು ರದ್ದುಗಳಿಸಿದೆ. ಈ ಉತ್ಪನ್ನಗಳಲ್ಲಿ ಹಲವು ದೇಶೀಯವಾಗಿ ಉತ್ಪಾದಿಸುವುದಿಲ್ಲ. ಇದು ಅಂತಹ ಸುಂಕಗಳು ಗ್ರಾಹಕರಿಗೆ ಹೊರೆಯಾಗುತ್ತವೆ ಎಂದು ಸಬೀತಾಗಿದೆ.
ಅಮೆರಿಕವು ಈಕ್ವೆಡಾರ್, ಗ್ವಾಟೆಮಾಲಾ, ಎಲ್ ಸಾಲ್ವಡಾರ್ ಮತ್ತು ಅರ್ಜೆಂಟೀನಾ ಜೊತೆ ಒಪ್ಪಂದ ಮಾಡಿಕೊಂಡ ಸ್ವಲ್ಪ ಸಮಯದ ನಂತರ ಟ್ರಂಪ್​ರಿಂದ ಆದೇಶ ಬಂದಿದೆ. ಈ ಒಪ್ಪಂದಗಳು ಈ ದೇಶಗಳ ಕೃಷಿ ಉತ್ಪನ್ನಗಳ ಮೇಲಿನ ಆಮದು ತೆರಿಗೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ. ಅಮೆರಿಕಕ್ಕೆ ಆಮದುಗಳನ್ನು ಹೆಚ್ಚಿಸುವ ಗುರಿಯೊಂದಿಗೆ ಕಾಫಿ ಮೇಲಿನ ಸುಂಕವನ್ನು ಕಡಿಮೆ ಮಾಡುವುದು ಸಹ ಯೋಜನೆಯ ಭಾಗವಾಗಿದೆ ಎಂದು ಟ್ರಂಪ್ ಈ ವಾರದ ಆರಂಭದಲ್ಲಿ ಹೇಳಿದ್ದರು.
ಟ್ರಂಪ್ ಪ್ರಚಾರವು ಆರ್ಥಿಕ ಚೇತರಿಕೆಯ ಭರವಸೆಗಳ ಮೇಲೆ ಕೇಂದ್ರೀಕೃತವಾಗಿತ್ತು. ಹೆಚ್ಚುತ್ತಿರುವ ಹಣದುಬ್ಬರವನ್ನು ಕಡಿಮೆ ಮಾಡುವುದು ಮತ್ತು ಉತ್ಪಾದನಾ ಉದ್ಯೋಗಗಳನ್ನು ಮರಳಿ ತರುವುದರ ಮೇಲೆ ಒತ್ತು ನೀಡಿದೆ. ಇದರ ಹೊರತಾಗಿಯೂ, ಟ್ರಂಪ್ ತಮ್ಮ ನೀತಿಗಳು ಆರ್ಥಿಕತೆಯನ್ನು ಬಲಪಡಿಸಿವೆ ಎಂದು ಹೇಳುತ್ತಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net